ರೇಜಿಸ್ಟಾರ್ ಪುತ್ರನ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಸಾಥ್.!
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ಮನೋರಂಜನ್ ಅಭಿನಯದ ಎರಡನೇ ಚಿತ್ರ 'ಬೃಹಸ್ಪತಿ' ಶೂಟಿಂಗ್ ಮುಗಿಸಿ ರಿಲೀಸ್ ಗೆ ರೆಡಿಯಾಗುತ್ತಿದೆ. ಇದೀಗ, ರವಿಮಾಮನ ಮಗನಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಥ್ ಕೊಡ್ತಿದ್ದಾರೆ. ಹೌದು, ಮನೋರಂಜನ್ ಅಭಿನಯಿಸಿರುವ ಹೊಸ ಚಿತ್ರದ ಒಂದು ಹಾಡನ್ನ ಪುನೀತ್ ಹಾಡಿದ್ದಾರೆ. ಈಗಾಗಲೇ ರೆಕಾರ್ಡಿಂಗ್ ಮುಗಿಸಿರುವ ಚಿತ್ರತಂಡ ಸದ್ಯದಲ್ಲೇ ಆಡಿಯೋ ಬಿಡುಗಡೆ ಮಾಡಲಿದೆ.ಅಂದ್ಹಾಗೆ, ಪುನೀತ್ ಹಾಡಿರುವ ಈ ಹಾಡಿಗೆ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದು, ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಪುನೀತ್ ಹಾಡಿದರೇ ಆ ಹಾಡು ಸೂಪರ್ ಹಿಟ್ ಆಗುತ್ತೆ ಎಂಬ ಟ್ರೆಂಡ್ ಸ್ಯಾಂಡಲ್ ವುಡ್ ನಲ್ಲಿದೆ. ಹೀಗಾಗಿ, ಈ ಹಾಡಿನ ಆಗಮನಕ್ಕಾಗಿ ಅಭಿಮಾನಿಗಳು ಕಾಯುವಂತಾಗಿದೆ.ಇನ್ನು ಹಿಂದಿ ಹಾಗೂ ತೆಲುಗು ಚಿತ್ರದಲ್ಲಿ ಗುರುತಿಸಿಕೊಂಡಿರುವ ನಟಿ 'ಮಿಷ್ಠಿ' ಈ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಡೈಲಾಗ್ ಕಿಂಗ್ ಸಾಯಿ ಕುಮಾರ್ ಮನೋರಂಜನ್ ಅವರ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ನಂದಕಿಶೋರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಅಂದ್ಹಾಗೆ, ಇದು ತಮಿಳಿನ 'ವಿಐಪಿ' ಚಿತ್ರದ ರೀಮೇಕ್.
Actor punith raj kumar supports for crazy star's movie,,,.watch this video